ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಲಂಡನಿನಲ್ಲಿ ಕಂಡ ಒಳ್ಳೆಯ “ತಾಲಿಬಾನ್”!

ಲಂಡನಿನಲ್ಲಿ ಕಂಡ ಒಳ್ಳೆಯ “ತಾಲಿಬಾನ್”!

Sat, 13 Mar 2010 02:55:00  Office Staff   S.O. News Service

ಒಳ್ಳೆಯ ತಾಲಿಬಾನ್ ಅಂತ ಇದೆಯಾ ಅಂತ ಆಶ್ಚರ್ಯ ಆಯ್ತಾ ? ತಾಲಿಬಾನ್ ಜಗತ್ತಿನ ಅತಿ ದುಷ್ಟ ಭಯೋತ್ಪಾದಕ ಶಕ್ತಿ ಅಂತ ಅಮೆರಿಕದ ಒಬಾಮಾನಿಂದ ಪಾಕಿಸ್ತಾನದ ಅಧ್ಯಕ್ಷ ಝರ್ದಾರಿವರೆಗೆ ಎಲ್ಲರೂ ಕರೀತಾರೆ ಅಲ್ವೆಹೌದುಇತ್ತೀಚಿನವರೆಗೆ ಅದು ನಿಜವಾಗಿತ್ತುಕೆಟ್ಟ ತಾಲಿಬಾನ್ ಬಗ್ಗು ಬಡಿಯುವುದಕ್ಕೆ ಒಳ್ಳೆಯ ತಾಲಿಬಾನ್ ಜತೆ ಅಡ್ಜಸ್ಟ್ ಮಾಡಬೇಕು ಅಂತ ಇತ್ತೀಚೆಗೆ ಅಮೆರಿಕ ಮತ್ತು ನಾಟೋ ದೇಶಗಳ ಸರ್ಕಾರಗಳಿಗೆ `ಜ್ಞಾನೋದಯ‘ ಆಗಿದೆಅವರಿಗೆ `ಜ್ಞಾನೋದಯ‘ ಆದ ಮೇಲೆ 70 ದೇಶಗಳ ನಾಯಕರಿಗೂ ಹಾಗನಿಸಹತ್ತಿದೆನಮ್ಮ ವಿದೇಶ ಮಂತ್ರಿ ಕೃಷ್ಣ ಸಹ ಮೊದಲು ಒಳ್ಳೆಯ ಮತ್ತು ಕೆಟ್ಟ ತಾಲಿಬಾನ್ ಅಂತ ಎರಡು ಪ್ರಕಾರಗಳು ಇಲ್ಲ ಅಂತ ಖಡಾಖಂಡಿತವಾಗಿ ಹೇಳಿನಂತರ ಮೆತ್ತಗಾಗಿ ತಾಲಿಬಾನಿಗೆ ಇನ್ನೊಂದು `ಛಾನ್ಸುಕೊಡಬೇಕು ಅಂತ ಹೇಳಿದರಂತೆರಶ್ಯಚೀನಾ ಮತ್ತು ಇರಾನ್ ಮಾತ್ರ `ಒಳ್ಳೆಯ ತಾಲಿಬಾನ್ಕೆಟ್ಟ ತಾಲಿಬಾನ್‘ ಎಂಬ ಅಮೆರಿಕದ ಈ ಹೊಸ ಥಿಯರಿ ವಿರೋಧಿಸಿವೆಯಂತೆ`ಒಳ್ಳೆಯ ತಾಲಿಬಾನ್‘ ಕಾಣಿಸಿಕೊಂಡಿದ್ದು ಲಂಡನಿನಲ್ಲಿ ಇತ್ತೀಚೆಗೆ ನಡೆದ ಅಫ್ಘಾನಿಸ್ತಾನದ ಮೇಲಿನ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿಲಂಡನ್ ಸಮ್ಮೇಳನ ನಡೆಸಿದ್ದು ಅಮೆರಿಕದ ಸರ್ಕಾರ ಮತ್ತು ನಾಟೋಸಮ್ಮೇಳನಕ್ಕೆ ಅಮೆರಿಕ ಮತ್ತು ನಾಟೋ ದೇಶಗಳಲ್ಲದೆ ರಶ್ಯಚೀನಾ ಮತ್ತು ಅಫ್ಘಾನಿಸ್ತಾನದ ನೆರೆಯ ದೇಶಗಳನ್ನು ಆಹ್ವಾನಿಸಲಾಗಿತ್ತುಒಳ್ಳೆಯ ತಾಲಿಬಾನರನ್ನು ಕೆಟ್ಟ ತಾಲಿಬಾನರಿಂದ ಪ್ರತ್ಯೇಕಿಸಿ ಅವರನ್ನು ಅಫ್ಘಾನಿಸ್ತಾನದ ಸಮಸ್ಯೆ ಬಗೆಹರಿಸುವುದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಒಮ್ಮತ (ರಶ್ಯಚೀನಾ ಮತ್ತು ಇರಾನ್ ಬಿಟ್ಟರೆವ್ಯಕ್ತವಾಯಿತಂತೆ.ಸಮ್ಮೇಳನದಲ್ಲಿ ಒಳ್ಳೆಯ ತಾಲಿಬಾನರ ಜತೆ ಮಾತುಕತೆಯ ಪ್ರಸ್ತಾವ ಬೆಂಬಲಿಸಿದ ಅಫ್ಘಾನಿ ಅಧ್ಯಕ್ಷ ಝರ್ದಾರಿ ನಾಟೋ ಪಡೆಗಳು ಕನಿಷ್ಟ 15 ವರ್ಷ ಅಫ್ಘಾನಿಸ್ತಾನದಲ್ಲಿ ಇರಬೇಕು ಅಂತ ವಿನಂತಿಸಿಕೊಂಡರಂತೆ ನಾಟೋ ಪ್ರತಿನಿಧಿಗಳು ಅದನ್ನು ಬಲವಾಗಿ ವಿರೋಧಿಸಿದರಂತೆ.

ಲಂಡನ್ ಸಮ್ಮೇಳನದಲ್ಲಿ `ಒಳ್ಳೆಯ ತಾಲಿಬಾನ್‘ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದಲ್ಲಅದರ ಮೊದಲೇ ಅಮೆರಿಕನ್ ಸರ್ಕಾರ`ಒಳ್ಳೆಯ ತಾಲಿಬಾನ್‘ ಹುಡುಕಲು ಆರಂಭಿಸಿತ್ತುಪಾಕಿಸ್ತಾನದ ಐಎಸ್ಐ ಮೂಲಕ ತಾಲಿಬಾನಿನ ಕೆಲವು ನಾಯಕರ ಜತೆ ಅಮೆರಿಕ ಮಾತುಕತೆ ನಡೆಸಿದೆಯಂತೆಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರತಿನಿಧಿ ಸಹ ಕೆಲವು ತಾಲಿಬಾನಿ ನಾಯಕರ ಜತೆ ಗುಪ್ತ ಮಾತುಕತೆ ನಡೆಸುತ್ತಿದ್ದಾರಂತೆಸಮ್ಮೇಳನದ ನಂತರವಂತೂ `ಒಳ್ಳೆಯ ತಾಲಿಬಾನ್‘ ಹುಡುಕುವ ಕೆಲಸ ರಭಸದಿಂದ ಸಾಗಿದೆ.ಅಮೆರಿಕ ಹಿಂದೆ ತಾಲಿಬಾನ್ ಸಕರ್ಾರದಲ್ಲಿ ವಿದೇಶ ಮಂತ್ರಿಯಾಗಿದ್ದವನ ಜತೆ ಬಹಿರಂಗವಾಗಿಯೇ ಮಾತುಕತೆಯಲ್ಲಿ ತೊಡಗಿದೆ`ಒಳ್ಳೆಯ‘ ತಾಲಿಬಾನ್ ಸೃಷ್ಟಿಗೆ ಫಂಡ್`ಒಳ್ಳೆಯ ತಾಲಿಬಾನ್‘ ಸಿಗದಿದ್ದರೆ ಕೆಲವು ತಾಲಿಬಾನರನ್ನು`ಒಳ್ಳೆಯವರನ್ನಾಗಿಸಲು (ಅಥವಾ `ಒಳ್ಳೆಯ‘ ತಾಲಿಬಾನರನ್ನು ಸೃಷ್ಟಿಸಲುಭಾರೀ ಪ್ರಮಾಣದಲ್ಲಿ ದುಡ್ಡು ಹೊಂಚಲಾಗುತ್ತಿದೆ.ನಾಟೋ ದೇಶಗಳು 65 ಕೋಟಿ ಡಾಲರು `ಟ್ರಸ್ಟ್ ಫಂಡ್ನ್ನು ಇದಕ್ಕಾಗಿ ತೆಗೆದಿರಿಸಿವೆತಾಲಿಬಾನರನ್ನು ಬೆಂಬಲಿಸುವ ಕೆಲವು ಬಾಡಿಗೆ ಸೈನ್ಯ ಒದಗಿಸುವ ದೊರೆಗಳು ಮತ್ತು ಬುಡಕಟ್ಟು ನಾಯಕರನ್ನು `ಮನಸ್ಸು ಬದಲಾಯಿಸಲು‘ (ಅಥವಾ`ಒಳ್ಳೆಯವರನ್ನಾಗಿಸಲುಅದನ್ನು ಬಳಸಲಾಗುವುದಂತೆಸೌದಿ ಅರೇಬಿಯಾ ಸಹ `ಒಳ್ಳೆಯ‘ ತಾಲಿಬಾನರ ಸೃಷ್ಟಿಗಾಗಿ ಅಫ್ಘಾನಿ ಸರ್ಕಾರಕ್ಕೆ 15 ಕೋಟಿ ಡಾಲರು ಬೆಂಬಲಧನ ಘೋಷಿಸಿದೆ.ತಾಲಿಬಾನರನ್ನು ವಿನಾಶ ಮಾಡಿ ಅಫ್ಘಾನಿಸ್ತಾನದ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದ ಅಮೆರಿಕ ಮತ್ತು ನಾಟೋಗಳಿಗೆ ಲಂಡನ್ ಸಮ್ಮೇಳನದಲ್ಲಿ `ಒಳ್ಳೆಯ ತಾಲಿಬಾನ್‘ ಕಂಡುಕೊಳ್ಳುವ ಈ ಸರ್ಕಸ್ಸು ಏಕೆ ಅಗತ್ಯವಾಯಿತುಎಷ್ಟೇ ಮಿಲಿಟರಿ ಪಡೆಗಳು ಶಸ್ತ್ರಾಸ್ತ್ರ ಗಳನ್ನು ಪಂಪ್ ಮಾಡಿದರೂಅಫ್ಘಾನಿಸ್ತಾನದ ಮಿಲಿಟರಿ ಅತಿಕ್ರಮಣ ಮುಂದುವರೆಸುವುದು ಸಾಧ್ಯವಿಲ್ಲಅಫ್ಘಾನಿಸ್ತಾನದಲ್ಲಿ ಈ ಪಡೆಗಳ ಮುಂದುವರಿಕೆಗೆ ವ್ಯಾಪಕ ವಿರೋಧ ಹೆಚ್ಚುತ್ತಿದೆ.ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕೆ ನಾಟೋ ದೇಶಗಳಲ್ಲಿ ಬೆಂಬಲ ಕುಗ್ಗುತ್ತಿದೆಅಮೆರಿಕದ ಪಡೆಗಳು ಸುಸ್ತಾಗಿವೆನಾಟೋ ದೇಶಗಳು ಕೊಡಬೇಕಾಗಿದ್ದ 10 ಸಾವಿರ ಹೆಚ್ಚಿನ ಪಡೆಗಳು ಬರುವ ಸಂಭವವಿಲ್ಲಫ್ರಾನ್ಸ್ ಹೆಚ್ಚಿನ ಪಡೆಗಳನ್ನು ಕಳಿಸಲು ನಿರಾಕರಿಸಿದೆಜರ್ಮನಿ ಬರಿಯ 500 ಹೆಚ್ಚಿನ ಪಡೆಗಳನ್ನು ಕಳಿಸುವುದಾಗಿ ಹೇಳಿದೆಹಾಲಂಡ್ ಇದ್ದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆಇದರ ಬಗ್ಗೆ ವಿವಾದದಲ್ಲಿ ಅಲ್ಲಿನ ಸರ್ಕಾರ ಬಿದ್ದು ಹೋಗಿದೆ.

ಭಾರತದ ಅಭಿಪ್ರಾಯ ಲಂಡನಿನಲ್ಲಿ ಲೆಕ್ಕಕ್ಕೆ ಇಲ್ಲಇವೆರಡೇ ಆಯ್ಕೆಗಳು ಇರುವುದು ಅಮೆರಿಕದ ಸರ್ಕಾರಕ್ಕೆಯುಧ್ಧ ಮುಂದುವರೆಸುತ್ತಲೇಅದರ ಜವಾಬ್ದಾರಿ ವೆಚ್ಚ ಇತರ ದೇಶಗಳ ಮೇಲೆ ಹಾಕಲು ಅಮೆರಿಕ ಪ್ರಯತ್ನಿಸುತ್ತಿದೆಈಗಿನ ಅಂದಾಜು ಪ್ರಕಾರ ಅವರ ಉದ್ದೇಶ ಸಾಧನೆ ಆಗಬೇಕಾದರೆ ಅಮೆರಿಕನ್ ಪಡೆಗಳು ಕನಿಷ್ಟ ವರ್ಷ ಮುಂದುವರೆಯಬೇಕುತಾಲಿಬಾನೀ ಪ್ರತಿರೋಧ ಕಡಿಮೆ ಮಾಡಿದರೆ ಮಯರ್ಾದೆಯಿಂದ ನಿಧಾನವಾಗಿ ಅಫ್ಘಾನಿಸ್ತಾನದಿಂದ ಹೋಗಬಹುದುತನ್ನ ಅಧಿಪತ್ಯ ಉಳಿಸಿಕೊಳ್ಳಬಹುದು ಅಂತ ಅಮೆರಿಕದ ಲೆಕ್ಕಾಚಾರಭಯೋತ್ಪಾದಕರನ್ನು (ಅಲ್-ಖೈದಾ ವನ್ನು ನೇರವಾಗಿ,ತಾಲಿಬಾನರನ್ನು ಐಎಸ್ಐ ಮೂಲಕಹುಟ್ಟು ಹಾಕಿ ಅವರ ವಿರುದ್ಧ ಸತತ ಯುದ್ಧ ಹೂಡುತ್ತೇವೆ ಎಂಬ ಸೋಗು ಹಾಕಿದ ಅಮೆರಿಕದ ನೀತಿಯಲ್ಲಿನ ವೈರುಧ್ಯವೇ ಇಂತಹ ಪರಿಸ್ಥಿತಿಗೆ ಕಾರಣ.

ಅವಮಾನಕಾರಿ ರೀತಿಯಲ್ಲಿ ಅಫ್ಘಾನಿಸ್ತಾನದಿಂದ ಕಾಲ್ತೆಗೆಯಬೇಕು ಅಥವಾ ತಾಲಿಬಾನಿನ ಜತೆ ಸಮಜಾಯಿಷಿ ಮಾಡಿಕೊಳ್ಳಬೇಕು. ಅಮೆರಿಕದ ಈ ಉಪಾಯ ಕೈಗೂಡಬೇಕಾದರೆ (ತಾಲಿಬಾನ್ ಹುಟ್ಟು ಹಾಕಿ ನಿಯಂತ್ರಿಸುತ್ತಿರುವ)ಪಾಕಿಸ್ತಾನದ ಐಎಸ್ಐ ಬೆಂಬಲ ಬೇಕುಆದ್ದರಿಂದ ಅಮೆರಿಕದ ದೃಷ್ಟಿಯಲ್ಲಿ ಲಂಡನ್ ಸಮ್ಮೇಳನದ ನಂತರ ಪಾಕಿಸ್ತಾನದ `ಬೆಲೆಏರಿದೆಅಮೆರಿಕದ ಕುರುಡು `ಜೂನಿಯರ್ ಪಾರ್ಟನರ್‘ ಆಗಿರುವ ಯುಪಿಎ ಸರ್ಕಾರದ ಹುಂಬ ವಿದೇಶ ನೀತಿ ಈ ಬೆಳವಣಿಗೆಯನ್ನು ಮುಂಗಾಣಲು ಮತ್ತು ಅರ್ಥ ಮಾಡಿಕೊಳ್ಳಲು ವಿಫಲವಾಗಿದೆಆದ್ದರಿಂದ ಭಾರತದ ಅಭಿಪ್ರಾಯವನ್ನು ಲಂಡನ್ ಸಮ್ಮೇಳನದಲ್ಲಿ ಕೇಳುವವರೇ ಇರಲಿಲ್ಲಅಮೆರಿಕದ ಬಾಲಂಗೋಚಿ ಎಂದು ಕಾಣಲಾದ ಭಾರತ ತನ್ನ ಸ್ವತಂತ್ರ ಅಭಿಪ್ರಾಯವನ್ನು ಸಮ್ಮೇಳನದಲ್ಲಿ ಧೃಢವಾಗಿ ಪ್ರತಿಪಾದಿಸಲೂ ಇಲ್ಲಅಫ್ಘಾನಿಸ್ತಾನಕ್ಕೆ ಧನ ಬೆಂಬಲ ನೀಡಿದ ಅತೀ ದೊಡ್ಡ ದೇಶಉತ್ತಮ ಸಂಬಂಧ ಮತ್ತು ವ್ಯೂಹಾತ್ಮಕ ಆಸಕ್ತಿ ಹೊಂದಿರುವ ಭಾರತಅಫ್ಘಾನಿಸ್ತಾನದ ಸಮಸ್ಯೆ ಬಗೆಹರಿಸುವುದರಲ್ಲಿ ಯಾವುದೇ ಪಾತ್ರ ವಹಿಸಲು ಸಾಧ್ಯವಾಗದೇ ಇರುವುದು ಯುಪಿಏ ಸರ್ಕಾರದ ಹುಂಬ ವಿದೇಶ ನೀತಿಯ ವೈಫಲ್ಯಕ್ಕೆ ಹಿಡಿದ ಕನ್ನಡಿ.ಅಫ್ಘಾನಿಸ್ತಾನದ ಮಿಲಿಟರಿ ಅತಿಕ್ರಮಣವನ್ನು ಬಲವಾಗಿ ವಿರೋಧಿಸಿ ಶಾಂತಿ ಮಾತುಕತೆ ಮೂಲಕ ಪರಿಹಾರ ಹುಡುಕುವ ನೀತಿಯನ್ನು ಪ್ರತಿಪಾದಿಸುತ್ತಾ ಬಂದಿದ್ದರೆ ಭಾರತ ಸ್ವತಂತ್ರವಾದ ವಿಶೇಷ ಪಾತ್ರ ವಹಿಸಬಹುದಾಗಿತ್ತು.

-ಶರತ್ ಚಂದ್ರ

ಸೌಜನ್ಯ: ಜನಶಕ್ತಿ


Share: